Current Date 22 Sep, 2026

2040ರಲ್ಲಿ ಪ್ರಪಂಚ ಹೇಗಿರುತ್ತೆ? ಜಾತಿ, ಮೊಬೈಲ್, ಹಸಿವು, ಯುದ್ಧ; 'UI' ಕರಾಳ ಸತ್ಯ ಬಿಚ್ಚಿಟ್ಟ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ 'UI' ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದಕ್ಕೆ 'UI' ವಾರ್ನರ್ ಎಂದು ಹೆಸರು ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ತಮ್ಮದೇ ಶೈಲಿಯಲ್ಲಿ ಮತ್ತೊಂದು ವಿಭಿನ್ನ ಕಥೆ ಹೇಳೊಕೆ ಬರ್ತಿದ್ದಾರೆ.

14 ವರ್ಷ ಹಿಂದೆ ಬಂದಿದ್ದ 'ಸೂಪರ್' ಚಿತ್ರದಲ್ಲಿ ಭವಿಷ್ಯದ ಭಾರತ ಹೇಗಿದ್ದರೆ ಚಂದ, ಹೇಗಿರಬೇಕು? ಅದಕ್ಕೆ ಏನೆಲ್ಲಾ ಬದಲಾವಣೆ ಆಗಬೇಕು? ಎನ್ನುವ ಬಗ್ಗೆ ಉಪೇಂದ್ರ ಕಥೆ ಮಾಡಿದ್ದರು. ರಿಯಲ್ ಸ್ಟಾರ್ ವಿಭಿನ್ನ ಆಲೋಚನೆಗೆ ಸಿನಿರಸಿಕರು ತಲೆದೂಗಿದ್ದರು. ಆದರೆ ಈ ಬಾರಿ ಅದಕ್ಕೆ ವಿರುದ್ಧ ಎನ್ನುವಂತಹ ಕತೆಯನ್ನು 'UI' ಚಿತ್ರದಲ್ಲಿ ಹೇಳಲು ಹೊರಟಿರುವುದು ಗೊತ್ತಾಗುತ್ತಿದೆ.