Current Date 30 Sep, 2026

40 ವರ್ಷ ಕನಸು ಈಡೇರಿಸಿಕೊಂಡ ನವರಸ ನಾಯಕ; ಶಂಕರ್‌ನಾಗ್ ಕನಸಿನ ಹಾದಿಯಲ್ಲಿ ನವರಸ ನಾಯಕ

ನವರಸ ನಾಯಕ ಜಗ್ಗೇಶ್ ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಆಕ್ಟಿವ್ ಆಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದರೂ, ಸಿನಿಮಾ ನಂಟು ಬಿಟ್ಟಿಲ್ಲ. ರಾಜಕೀಯ ಜೀವನ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾ ಚಟುವಟಿಕೆಗಳಲ್ಲೂ ಆಕ್ಟಿವ್ ಆಗಿದ್ದಾರೆ. ಇದೇ ವೇಳೆ ತಮ್ಮ 40 ವರ್ಷಗಳ ಹಳೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಜಗ್ಗೇಶ್ ಬೆಂಗಳೂರಿನಲ್ಲಿ ಹೊಸದೊಂದು ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅತ್ಯಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಈ ಸ್ಟುಡಿಯೋದಲ್ಲಿ ಒದಗಿದ್ದಾರೆ. ಕನ್ನಡ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡುವುದಕ್ಕೆ ಈ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ 'ಜಗ್ಗೇಶ್ ಸ್ಟುಡಿಯೋಸ್' ಅಂತಲೇ ಹೆಸರಿಟ್ಟಿದ್ದಾರೆ.