Current Date 28 Sep, 2026

777 ಚಾರ್ಲಿ' ಚಿತ್ರದ ಬಜೆಟ್, ಲಾಭದ ಪಿನ್ ಟು ಪಿನ್ ಲೆಕ್ಕ ಕೊಟ್ಟ ಕಿರಣ್ ರಾಜ್

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಎರಡು ವರ್ಷದ ಹಿಂದೆ ದಾಖಲೆ ಬರೆದಿತ್ತು. ಕೊರೋನಾ ಹಾವಳಿ ಗೊಂದಲದ ನಡುವೆಯೇ ಸಿನಿಮಾ ತೆರೆಗೆ ಬಂದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ರಕ್ಷಿತ್ ಜೊತೆ ಲ್ಯಾಬ್ರಡಾರ್ ನಾಯಿಯೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿತ್ತು. ಸ್ವತಃ ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದರು. ತಮ್ಮ ಬಳಗದಲ್ಲಿದ್ದ ಕಿರಣ್ ರಾಜ್‌ಗೆ ನಿರ್ದೇಶನದ ಅವಕಾಶ ಕೊಟ್ಟಿದ್ದರು. ಸಿನಿಮಾ ತೆರೆಮೇಲೆ ಜಾದೂ ಮಾಡಿತ್ತು. ಪ್ರಾಣಿ ಪ್ರಿಯರಿಗೆ ಹೆಚ್ಚು ಇಷ್ಟವಾಗಿತ್ತು. ಚಿತ್ರ 100 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿದ್ದಾಗಿ ಸುದ್ದಿ ಆಗಿತ್ತು. ಆದರೆ '777 ಚಾರ್ಲಿ' ಸಿನಿಮಾ ತೆರೆಗೆ ಬರುವ ಮುನ್ನವೇ 4 ಕೋಟಿ ರೂ. ಲಾಭದಲ್ಲಿ ಇತ್ತು ಎನ್ನುವ ಇಂಟ್ರೆಸ್ಟಿಂಗ್ ಸಂಗತಿ ಈಗ ರಿವೀಲ್ ಆಗಿದೆ.