Current Date 22 Sep, 2026

90ರ ದಶಕದಲ್ಲಿ ಕನ್ನಡ ಚಿತ್ರೋದ್ಯಮದಲ್ಲಿತ್ತಾ ಕಾಸ್ಟಿಂಗ್‌ ಕೌಚ್‌? ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದ ನಟಿ ಪ್ರೇಮಾ

ಅವಕಾಶ ಸಿಗುತ್ತೆ ಎಂದಾದರೆ ಅಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದದ್ದೇ. ಅದರಲ್ಲೂ ಬಣ್ಣದ ಲೋಕದಲ್ಲಿ ಆ ವಿಚಾರ ಆಗಾಗ ಹೆಚ್ಚು ಮುನ್ನೆಲೆಗೆ ಬರುತ್ತಲಿರುತ್ತದೆ. ಸಿನಿಮಾ ಅವಕಾಶ ಬೇಕೆಂದರೆ, ನಟಿಯರು ಒಂದಷ್ಟು ಕಾಂಪ್ರಮೈಸ್‌ ಮಾಡಿಕೊಳ್ಳಲೇಬೇಕು ಎಂಬ ಮಾತಿದೆ. ಅಂಥ ಪರಿಸ್ಥಿತಿ ಎದುರಾದಾಗ ಅದಕ್ಕೆ ಎದೆಕೊಟ್ಟು ಎದುರಿಸಿದ ಎಷ್ಟೋ ನಟಿಯರಿದ್ದಾರೆ. ನಿಮ್ಮ ಚಿತ್ರದ ಅವಕಾಶವೇ ಬೇಡ ಎಂದು ಮುಖಕ್ಕೆ ಹೊಡದಂತೆ ಹೇಳಿ ಹೋದ ಎಷ್ಟೋ ನಟಿಯರಿದ್ದಾರೆ. ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ನೇರವಾಗಿಯೂ ಮಾತನಾಡಿ ಧೈರ್ಯವಂತೆ ಎನಿಸಿಕೊಂಡವರಿದ್ದಾರೆ. ಇದೀಗ ಇದೇ ಕಾಸ್ಟಿಂಗ್‌ ಕೌಚ್‌ ಕರಾಳತೆ ಬಗ್ಗೆ ಕನ್ನಡ ಚಿತ್ರೋದ್ಯಮ ಕಂಡ ಸ್ಟಾರ್‌ ನಟಿ ಪ್ರೇಮಾ ಮಾತನಾಡಿದ್ದಾರೆ.