Current Date 22 Sep, 2026

Sapthami Gowda:ಬೆಂಗಳೂರಿನಲ್ಲಿ ಮಳೆ, ಅದೇ ಮೂಡ್‌ನಲ್ಲಿ ಕೂಲ್ ಆಗಿ ಮಿಂಚಿದ ಸಪ್ತಮಿಗೌಡ

'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದೇ ಮಾಡಿದ್ದು ಸಪ್ತಮಿ ಗೌಡ ಸ್ಟಾರ್ ಆಗಿಬಿಟ್ಟರು. ಇದೇ ಜೋಷ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಮಾಡಿದ್ದರು. ಅದರಲ್ಲೊಂದು ಸಿನಿಮಾ ಸೋತರೆ, ಮತ್ತೊಂದು ಗೆದ್ದಿದೆ. ವಿಶೇಷ ಅಂದರೆ, ಕನ್ನಡದಲ್ಲಿ ನಟಿಸಿದ ಮೂರು ಸಿನಿಮಾಗಳೂ ಸದ್ದು ಮಾಡಿದೆ.

'ಪಾಪ್‌ಕಾರ್ನ್ ಮಂಕಿ ಟೈಗರ್' ಸಪ್ತಮಿ ಗೌಡ ನಟಿಸಿದ ಚೊಚ್ಚಲ ಸಿನಿಮಾ. ಸೂರಿ ನಿರ್ದೇಶಿಸಿದ ಈ ಚಿತ್ರ ಗೆಲುವಿನ ನಗೆ ಬೀರಿತ್ತು. ಬಳಿಕ ರಿಷಬ್ ಶೆಟ್ಟಿ ಜೊತೆ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೋರಾಗಿ ಸದ್ದು ಮಾಡಿತ್ತು. ಎರಡನೇ ಸಿನಿಮಾಗೆ ಸಪ್ತಮಿ ಗೌಡ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು.
Sapthami Gowda:ಬೆಂಗಳೂರಿನಲ್ಲಿ ಮಳೆ, ಅದೇ ಮೂಡ್‌ನಲ್ಲಿ ಕೂಲ್ ಆಗಿ ಮಿಂಚಿದ ಸಪ್ತಮಿಗೌಡ