Current Date 31 Jul, 2026

ತರುಣ್ ಸುಧೀರ್ ಜೊತೆ ಸಪ್ತಪದಿ ತುಳಿದ ಸೋನಾಲ್ ಮಾಂಥೆರೋ; ಹೇಗಿತ್ತು ಸ್ಯಾಂಡಲ್‌ವುಡ್ ಜೋಡಿಯ ಮದುವೆ?

ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ಮದುವೆ ಅದ್ಧೂರಿಯಾಗಿ ನಡೆದಿದೆ. ನಿನ್ನೆ (ಆಗಸ್ಟ್ 10) ತರುಣ್ ಸುಧೀರ್ ಹಾಗೂ ಸೋನಾಲ್ ಆರತಕ್ಷತೆ ಸಮಾರಂಭ ನಡೆದಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಈ ಸಮಾರಂಭಕ್ಕೆ ಆಗಮಿಸಿ, ನವ ಜೋಡಿಗೆ ಆಶೀರ್ವಾದ ಮಾಡಿದ್ದರು. ಇಂದು (ಆಗಸ್ಟ್ 11) ಈ ಜೋಡಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಗಸ್ಟ್ 11 ಈ ಜೋಡಿಗೆ ವಿಶೇಷ ದಿನ. ಯಾಕಂದ್ರೆ, ನಟಿ ಸೋನಾಲ್ ಮಾಂಥೆರೋಗೆ ಎರಡೆರಡು ಸಂಭ್ರಮ. ಒಂದ್ಕಡೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಮದುವೆ ದಿನವೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಸಂಭ್ರಮಗಳು ಒಂದೇ ದಿನ ಬಂದಿರುವುದು ಸೋನಾಲ್ ಮಾಂಥೆರೋಗೆ ನಿಜಕ್ಕೂ ಸ್ಪೆಷಲ್.