Current Date 31 Jul, 2026

Bhairathi Ranagal Box Office Day 4: ಸೋಮವಾರದ ಅಗ್ನಿ ಪರೀಕ್ಷೆ ಗೆದ್ದನೇ 'ಭೈರತಿ ರಣಗಲ್'? 4ನೇ ದಿನ ಗಳಿಸಿದ್ದೆಷ್ಟು?

2024ರ ಕೊನೆಯಲ್ಲಿ ಕನ್ನಡ ಚಿತ್ರರಂಗ ಹೊಸ ಹರುಪು ಬಂದಿದೆ. ಇಲ್ಲಿವರೆಗೂ ನಿರಂತರ ಸೋಲನ್ನು ಕಂಡಿರುವ ಕನ್ನಡ ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಸಿನಿಮಾ ಸಿಗುವ ಎಲ್ಲ ಸೂಚನೆಗಳು ಸಿಗುತ್ತಿವೆ. ಐದು ದಿನಗಳ ಹಿಂದಷ್ಟೇ ರಿಲೀಸ್ ಆಗಿರುವ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಓಟವನ್ನು ಮುಂದುವರೆಸಿದೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಸ್ಯಾಂಡಲ್‌ವುಡ್ ಮಂದಿಯಲ್ಲಿ ಕಿರು ನಗೆ ಬೀರಿದೆ. ಈ ವರ್ಷ ಕೂಡ ಸೋಲಿನ ಕಹಿಯಲ್ಲೇ ಮುಗಿಸಬೇಕು ಅಂತಿದ್ದ ಸಿನಿಮಾ ಮಂದಿಗೆ ಶಿವಣ್ಣ ಮತ್ತೆ ಉತ್ಸಾಹ ತುಂಬಿದ್ದಾರೆ. ಸೆಂಚುರಿ ಸ್ಟಾರ್ ನಟಿಸಿದ 'ಭೈರತಿ ರಣಗಲ್' ಕಳೆದ ನಾಲ್ಕು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಸೋಮವಾರ ಕೂಡ ಸರ್ಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಲೆಕ್ಷನ್ ಕೂಡ ಚೆನ್ನಾಗಿ ಆಗಿದೆ. ಇನ್ನೊಂದು ವಾರದಲ್ಲಿ ಇನ್ನೂ ಒಳ್ಳೆಯ ಗಳಿಕೆ ಕಾಣಬಹುದೆಂಬ ನಿರೀಕ್ಷೆಯಿದೆ.