ಕನ್ನಡ ಬಾಕ್ಸಾಫೀಸ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಖದರ್ ಮತ್ತೆ ಆರಂಭ ಆಗಿದೆ. ಶಿವಣ್ಣನ 'ಭೈರತಿ ರಣಗಲ್' ಮ್ಯಾನರಿಸಂಗೆ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಥಿಯೇಟರ್‍ನಲ್ಲಿ ಶಿಳ್ಳೆಗಳ ಸದ್ದು ಜೋರಾಗಿದೆ. ಈ ಸಂಬಂಧ ಚಿತ್ರತಂಡ ಈಗಾಗಲೇ ಸಕ್ಸಸ್ ಮೀಟ್ ಅನ್ನು ಮಾಡಿ ಖುಷಿಯನ್ನು ಹಂಚಿಕೊಂಡಿದೆ. ಈ ಮೂಲಕ ನಷ್ಟದಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಆಶಾಭಾವನೆ ಮೂಡಿದೆ.
ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳ ಬಳಿಕ ಯಾವುದೇ ಸಿನಿಮಾ ಇದ್ದರೂ ಕಲೆಕ್ಷನ್ ಡ್ರಾಪ್ ಆಗುತ್ತೆ. 'ಭೈರತಿ ರಣಗಲ್' ಕೂಡ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡದೆ. ಹಾಗಂತ ಇದನ್ನು ಡೌನ್‌ಫಾಲ್ ಅನ್ನುವ ಹಾಗಿಲ್ಲ. ಯಾಕಂದ್ರೆ, ಸಹಜವಾಗಿ ವಾರದ ಆರಂಭದಲ್ಲಿ ಜನರು ಮೊದಲ ಮೂರು ಶೋಗಳಿಗೆ ಸಿನಿಮಾ ನೋಡುವುದಕ್ಕೆ ಬರುವುದಿಲ್ಲ. ಕೊನೆಯ ಎರಡರಿಂದ ಮೂರು ಶೋಗಳು ಉತ್ತಮ ಪ್ರದರ್ಶನ ಕಾಣುತ್ತವೆ.