Current Date 22 Sep, 2026

Bhairathi Ranagal Box Office Day 6: 6ನೇ ದಿನ 'ಭೈರತಿ ರಣಗಲ್' ಕಲೆಕ್ಷನ್ ಹೇಗಿದೆ? ಕಡಿಮೆನಾ ಅಥವಾ ಜಾಸ್ತಿನಾ?

ಶಿವರಾಜ್‌ಕುಮಾರ್ ಸಿನಿಮಾ 'ಭೈರತಿ ರಣಗಲ್'ಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಣ್ಣ ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಷನ್ ಮತ್ತೊಮ್ಮೆ ವರ್ಕ್ ಆಗಿದೆ. 'ಭೈರತಿ ರಣಗಲ್'ಗೆ ಸಿಗುತ್ತಿರುವ ರೆಸ್ಪಾನ್ಸ್‌ಗೆ ಸಿನಿಮಾ ತಂಡ ಕೂಡ ಖುಷಿಯಾಗಿದೆ. ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ತಾರೆಯರು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ನಿನ್ನೆಯಷ್ಟೇ (ನವೆಂಬರ್ 20) ದುನಿಯಾ ವಿಜಯ್ ಕೂಡ ಈ ಸಿನಿಮಾವನ್ನು ನೋಡಿ ಇಷ್ಟ ಪಟ್ಟಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪಾತ್ರವನ್ನು ಮನಸಾರೆ ಹೊಗಳಿದ್ದಾರೆ. ಶಿವಣ್ಣನೊಂದಿಗೆ ಸಿನಿಮಾ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. 'ಭೈರತಿ ರಣಗಲ್' ಸದ್ಯ ಪ್ರೇಕ್ಷಕರಿಗೆ ಅಷ್ಟೇ ಅಲ್ಲ. ಸಿನಿಮಾ ತಾರೆಯರಿಗೂ ಕೂಡ ಇಷ್ಟ ಆಗಿದೆ. ಹಾಗೇ ವೀಕ್‌ ಡೇಸ್‌ನಲ್ಲೂ ಕೆಲವು ಥಿಯೇಟರ್‌ಗಳು ಹೌಸ್‌ ಫುಲ್ ಪ್ರದರ್ಶನ ಕಾಣುತ್ತಿವೆ.