ಆ ಕಣ್ಣುಗಳಲ್ಲಿ ಕನಸಿತ್ತು. ನೆಮ್ಮದಿಯ ನಿದ್ದೆ ಹತ್ತಿತ್ತು. ಆದರೆ ಉಳ್ಳವರ ಕೊಬ್ಬಿನ ಬೊಬ್ಬೆಗೆ ಆ ಕನಸೇ ಮರೆಯಾಗಿದೆ. ಕಣ್ಣಿಗೆ ನಿದ್ದೆ ಇಲ್ಲದಂತಾಗಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಶೇಖರನ ಎದೆ, ಕಣ್ಣುಗಳಲ್ಲಿ ರೋಷದ ಬೆಂಕಿ ಇನ್ನೂ ಹಾಗೆ ಇದೆ. ಇದು ದಸ್ಕತ್ 9ನೇ ತರಗತಿ ಫೇಲಾದ ದಡ್ಡ ಹುಡುಗ 'ದಸ್ಕತ್' ಗೆದ್ದ ಕಥೆ.
'ದಸ್ಕತ್', ತುಳುನಾಡಿನ ಸಿನಿಮಾ ಇತಿಹಾಸದಲ್ಲಿ ಹೊಸ ಷರಾ ಬರೆದಿದೆ. ಇದೇ ದಸ್ಕತ್ನಲ್ಲಿ ನಟನೆಯಿಂದ ದಂಗಾಗಿಸಿರೋದು ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆ. ಚಿತ್ರರಂಗದ ಹಿನ್ನೆಲೆಯಿಲ್ಲದೆ, ಬಣ್ಣದ ಬದುಕಿನಲ್ಲಿ ಮಿಂದೇಳುವ ಕನಸು ಕಂಡ ದೀಕ್ಷಿತ್, ತಮ್ಮ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಗೆದ್ದಿದ್ದಾರೆ.