Current Date 25 Aug, 2026

"ಕಪಟಿ" - ಡಾರ್ಕ್ ವೆಬ್‌ನಲ್ಲಿ ರೋಮಾಂಚನಕಾರಿ ಸವಾರಿ : ಟ್ರೈಲರ್ ಬಿಡುಗಡೆ.

ಹೆಸರಾಂತ ಚಲನಚಿತ್ರ ನಿರ್ಮಾಪಕ ದಯಾಳ್ ಪದ್ಮನಾಭನ್ ಅವರು ಡಿ ಪಿಕ್ಚರ್ಸ್ ಲಾಂಛನದಲ್ಲಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಶಸ್ತಿ ವಿಜೇತ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ “ಹಗ್ಗದ ಕೊನೆ”, “ಆ ಕರಾಳ ರಾತ್ರಿ”, “ತ್ರಯಂಬಕಂ” ಮುಂತಾದ ಚಲನಚಿತ್ರಗಳನ್ನು ನಿರ್ಮಿಸಿರುವ ಡಿ ಪಿಕ್ಚರ್ಸ್ ಸಂಸ್ಥೆಯಿಂದಲೇ “ಕಪಟಿ” ಚಿತ್ರ ಕೂಡ ನಿರ್ಮಾಣವಾಗಿದೆ.

ಡಾರ್ಕ್ ವೆಬ್ ಹಾರರ್ ಮೀಟ್ಸ್ ಸೈಕಲಾಜಿಕಲ್ ಥ್ರಿಲ್ಲರ್ – ಸೈಬರ್ ಕ್ರೈಮ್, ಮಿಸ್ಟರಿ ಮತ್ತು ವಿಲಕ್ಷಣ ಸಸ್ಪೆನ್ಸ್‌ನ ಸಂಗಮವಾಗಿರುವ ಈ ಚಿತ್ರದ ಅನಿರೀಕ್ಷಿತ ಟ್ವಿಸ್ಟ್‌ಗಳು – ಗಾನ್ ಗರ್ಲ್, ಸರ್ಚಿಂಗ್, ಸಿ ಯು ಸೂನ್ ಮತ್ತು ಅನ್‌ಫ್ರೆಂಡ್‌ ನಂತಹ ಥ್ರಿಲ್ಲರ್‌ಗಳಿಂದ ಸ್ಫೂರ್ತಿ ಪಡೆದಿದೆ.