Current Date 22 Sep, 2026

KGF' ಮುನ್ನ ಕನ್ನಡ ಚಿತ್ರರಂಗ ಅಷ್ಟಕ್ಕಷ್ಟೆ ಎಂದಿದ್ದಕ್ಕೆ ಉಪ್ಪಿ ತಿರುಗೇಟು

ಕಾಂತಾರ' ಹಾಗೂ 'KGF' ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳು. ಆದರೆ ಅದಕ್ಕೂ ಮುನ್ನ ಕನ್ನಡದಲ್ಲಿ ಸಾಕಷ್ಟು ಅದ್ಭುತ ಚಿತ್ರಗಳು ಬಂದಿವೆ. ಹಲವು ಪ್ರಯೋಗಗಳು ಕನ್ನಡ ಚಿತ್ರರಂಗದಲ್ಲಾಗಿದೆ. ಆದರೆ ಪರಭಾಷಿಕರು ಮಾತ್ರ 'KGF' ಚಿತ್ರದಿಂದಲೇ ಕನ್ನಡ ಚಿತ್ರರಂಗ ಸದ್ದು ಮಾಡಿತು ಎನ್ನುವ ಭ್ರಮೆಯಲ್ಲಿದ್ದಾರೆ.

ನಟ, ನಿರ್ದೇಶಕ ಉಪೇಂದ್ರ ಮುಂದೆ ತೆಲುಗು ಪತ್ರಕರ್ತರೊಬ್ಬರು ಇದೇ ರೀತಿಯ ಪ್ರಶ್ನೆ ಇಟ್ಟಿದ್ದಾರೆ. ಆದರೆ ಅದಕ್ಕೆ ಉಪ್ಪಿ ಉತ್ತರ ಮಾತ್ರ ಕನ್ನಡ ಸಿನಿರಸಿಕರ ಗಮನ ಸೆಳೆದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. 'ಯುಐ' ಸಿನಿಮಾ ಪ್ರಚಾರಕ್ಕಾಗಿ ಉಪೇಂದ್ರ ಹೈದರಾಬ್‌ಗೆ ತೆರಳಿದ್ದಾರೆ. ಅಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.