ಹೈ5 ಸ್ಟುಡಿಯೋಸ್ ನಿರ್ಮಾಣದ ಚೊಚ್ಚಲ ಸಿನಿಮಾ ಎಲ್ಟು ಮುತ್ತಾ ಟೈಟಲ್ ನಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್ ಮೂಲಕ ಗಮನಸೆಳೆದಿದ್ದ ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದರ ಮುಂದೆ ಬಂದಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಎಲ್ಟಾ ಮುತ್ತಾ ಚಿತ್ರತಂಡದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು, ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಚಿತ್ರದ ಬಗ್ಗೆ ನಿರ್ದೇಶಕರು, ನಿರ್ಮಾಪಕ ಹಾಗೂ ಇಡೀ ತಂಡ ಮಾಹಿತಿ ಹಂಚಿಕೊಂಡಿದೆ. ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ, ಹೈ5 ಸ್ಟುಡಿಯೋವನ್ನು ಎರಡು ಉದ್ದೇಶದಿಂದ ಶುರು ಮಾಡಿದ್ದೇವು. ಒಳ್ಳೆ ಸಿನಿಮಾ ಮಾಡಬೇಕು. ಹಾಗೂ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಬೇಕು ಎಂದು ಸ್ಟುಡಿಯೋಸ್ ಪ್ರಾರಂಭಿಸಿದ್ದೇವು. ಮೊದಲು ಎಲ್ಟು ಮುತ್ತಾ ಎಂಬ ಚಿತ್ರ ಮಾಡಿದ್ದೇವೆ. ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ರಿಲೀಸ್ ಗೆ ರೆಡಿ ಇದ್ದೇವೆ. 50 ದಿನ ಕೊಡಗು ಹಾಗೂ 2 ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.