Current Date 28 Sep, 2026

Laughing Buddha OTT: ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್‌ ಬುದ್ಧ' ಚಿತ್ರ ಓಟಿಟಿಗೆ ಬಂತು

ಓಟಿಟಿಯಲ್ಲಿ ವಿನಯ್ ರಾಜ್‌ಕುಮಾರ್ 'ಪೆಪೆ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಬಹಳ ದಿನಗಳಿಂದ ಈ ಚಿತ್ರಕ್ಕಾಗಿ ಓಟಿಟಿ ಚಂದಾದಾರರು ಕಾಯುತ್ತಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತರೂ ಟೀಸರ್, ಟ್ರೈಲರ್ ನೋಡಿದವರು ಸಿನಿಮಾ ನೋಡಲು ಬಯಸಿದ್ದರು. ಆದರೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕ ಕಾರಣ ಸುಮ್ಮನಾಗಿದ್ದರು. ಸದ್ಯ 'ಪೆಪೆ' ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಸಿನಿರಸಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾ ಓಟಿಟಿ ರಿಲೀಸ್‌ಗೆ ಸಜ್ಜಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದ 'ಲಾಫಿಂಗ್ ಬುದ್ಧ' ಸಿನಿಮಾ ತಕ್ಕಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು. ಇದೀಗ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ.