ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಹಾಗೂ ಸೋನಾಲ್ ಮೊಂತೆರೊ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮಾದೇವ' ಜೂನ್ 6ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇನ್ನು ಸಿನಿಮಾ ಕೂಡ ಒಳ್ಳೆರೀತಿ ಸಾಗುತ್ತಿದೆ. ಸಿನಿಮಾವನ್ನು ಜನ ಮೆಚ್ಚಿದ್ದಾರೆ. ಆದರೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್ನಲ್ಲಿ ಇದೀಗ ಸೂಕ್ತ ಪ್ರಮಾಣದ ಶೋಗಳಿಗೆ ಅವಕಾಶ ಸಿಕ್ಕಿಲ್ಲ. ಹಿಂದಿ ಸಿನಿಮಾಗಳು (Hindi Cinema) ಹೆಚ್ಚು ಪ್ರದರ್ಶನಗೊಳ್ಳುತ್ತಿದೆ. ಈ ಬಗ್ಗೆ ಸ್ವತಃ ನಾಯಕ ನಟ ವಿನೋದ್ ಪ್ರಭಾಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ಹೊರಹಾಕಿದರು. ಭಿಕ್ಷೆ ಬೇಡೋ ಸ್ಥಿತಿಗೆ ಬಂದಿದ್ದೇವೆ