Current Date 01 Aug, 2026

Navagraha Box Office Day 3: 3ನೇ ದಿನ 'ನವಗ್ರಹ' ಕಲೆಕ್ಷನ್‌ನಲ್ಲಿ ಏರಿಕೆ; ದರ್ಶನ್ ಫ್ಯಾನ್ಸ್‌ ದಿಲ್ ಖುಷ್

ದರ್ಶನ್ ಹೊಸ ಸಿನಿಮಾ ಇನ್ನೂ ಒಂದು ವರ್ಷ ರಿಲೀಸ್ ಆಗುವುದು ಅನುಮಾನ. ಈ ಬೆನ್ನಲ್ಲೇ ದರ್ಶನ್ ನಟಿಸಿದ ಸಿನಿಮಾಗಳನ್ನು ಆಗಾಗ ಮರು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಅವರದ್ದೇ ನಿರ್ಮಾಣ ಸಂಸ್ಥೆಯಲ್ಲಿ ಸೆಟ್ಟೇರಿದ್ದ ಸಿನಿಮಾ 'ನವಗ್ರಹ' ಕೂಡ ಒಂದು. ತೂಗುದೀಪ ಪ್ರೊಡಕ್ಷನ್ ನಿರ್ಮಿಸಿದ್ದ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿ ಮಾಡಿತ್ತು.

ದಿನಕರ್ ತೂಗುದೀಪ ನಿರ್ದೇಶಿಸಿದ್ದ ಈ ಸಿನಿಮಾ ಕನ್ನಡದ ಮಟ್ಟಿಗೆ ಹೊಸ ಪ್ರಯತ್ನ ಆಗಿತ್ತು. 16 ವರ್ಷಗಳ ಹಿಂದೆನೇ 'ನವಗ್ರಹ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅದರಲ್ಲೂ ಕನ್ನಡ ಚಿತ್ರರಂಗದ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ್ದು ಅಂದಿನ ಕಾಲಕ್ಕೆ ದೊಡ್ಡ ಮಟ್ಟಕ್ಕೆ ಸದ್ದಾಗಿತ್ತು. ಈಗ ಅದೇ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.