Current Date 12 Nov, 2025

ವಿಜಯ ದಶಮಿಯ ದಿನ ನೂತನ ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್

ಎರಡನೇ ಚಿತ್ರಕ್ಕೂ”ಕೊತ್ತಲವಾಡಿ” ನಿರ್ದೇಶಕ ಶ್ರೀರಾಜ್ ಅವರದೆ ನಿರ್ದೇಶನ.

ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಲಾಂಛನದಲ್ಲಿ ತಮ್ಮ ಮೊದಲ ಚಿತ್ರವಾಗಿ “ಕೊತ್ತಲವಾಡಿ” ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗ ವಿಜಯ ದಶಮಿಯ ಶುಭದಿನದಂದು PA ಪ್ರೊಡಕ್ಷನ್ಸ್ ಮೂಲಕ ಎರಡನೇ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಈ ಚಿತ್ರವನ್ನೂ “ಕೊತ್ತಲವಾಡಿ” ನಿರ್ದೇಶಕ ಶ್ರೀರಾಜ್ ಅವರೆ ನಿರ್ದೇಶಿಸಲಿದ್ದಾರೆ. ಬಹುತೇಕ “ಕೊತ್ತಲವಾಡಿ” ಚಿತ್ರದ ತಂತ್ರಜ್ಞರ ತಂಡವೇ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ ಎಂದು ತಿಳಿಸಿರುವ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್, ಸದ್ಯದಲ್ಲೇ ನೂತನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.