Current Date 16 Apr, 2026

ಅಮೆರಿಕದ ಯುನಿವರ್ಸಿಟಿಯಿಂದ ಪಿಆರ್‌ಓ ವೆಂಕಟೇಶ್‌ಗೆ ಗೌರವ ಡಾಕ್ಟರೇಟ್‍; ಮಂತ್ರಾಲಯದಲ್ಲಿ ಪ್ರಶಸ್ತಿ ಪ್ರದಾನ

ಕನ್ನಡ ಚಿತ್ರರಂಗದಲ್ಲಿ ಕಳೆದ ಐದು ದಶಕಗಳಿಂದ ಶ್ರೀ ರಾಘವೇಂದ್ರ ಚಿತ್ರವಾಣಿಯ ಮೂಲಕ ಸುಧೀಂದ್ರ ವೆಂಕಟೇಶ್ ಕೆಲಸ ಮಾಡುತ್ತಾ ಬಂದಿದ್ದಾರೆ. ಇನ್ನೂ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಧೀಂದ್ರ ವೆಂಕಟೇಶ್ ಅವರ ಮುಂದಾಳತ್ವದಲ್ಲಿ ಈ ಸಂಸ್ಥೆ ಹೆಜ್ಜೆ ಹಾಕುತ್ತಿದೆ. ಇಲ್ಲಿವರೆಗೂ ಮಾಡಿರುವ ಈ ಸಾಧನೆಯನ್ನು ಪರಿಗಣಿಸಿ, ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ. ಸುಧೀಂದ್ರ ವೆಂಕಟೇಶ್ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅಮೆರಿಕಾದ ಫ್ಲೋರಿಡಾದಲ್ಲಿರುವ ಯೋಗ -ಸಂಸ್ಕೃತಂ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದೆ. ಇದು ಸುಧೀಂದ್ರ ವೆಂಕಟೇಶ್ ಅವರ ಕಲಾ ಸೇವೆಗೆ ಸಂದಿರುವ ಗೌರವ. ಈ ಸಂಬಂಧ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮಂತ್ರಾಯಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸ್ವೀಕರಿಸಿದ್ದಾರೆ.