Current Date 22 Sep, 2026

ಕೆಜಿಎಫ್ ಕನ್ನಡ ಸಿನಿಮಾ ಅಲ್ಲವೇ ಅಲ್ಲ"; ಯಶ್ ಸಿನಿಮಾ ಬಗ್ಗೆ ವಾಟಾಳ್ ನಾಗರಾಜ್ ಕುಟುಕಿದ್ದೇಕೆ?

ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾಗಳು 'ಕೆಜಿಎಫ್', 'ಕಾಂತಾರ' ಅನ್ನೋದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ ಅಂತಿದ್ದವರು, ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಟ್ಟಕ್ಕೆ ಕನ್ನಡ ಸಿನಿಮಾ ಬೆಳೆದು ನಿಂತಿರೋದು ನಿಜ.
'ಕೆಜಿಎಫ್ 2', 'ಕಾಂತಾರ' ಸಿನಿಮಾಗಳು ಭಾರತದ ಬಾಕ್ಸಾಫೀಸ್‌ ಅನ್ನೇ ಕೊಳ್ಳೆ ಹೊಡೆದಿವೆ. ನಿರ್ಮಾಣ ಸಂಸ್ಥೆಗಳಿಗೆ ಇನ್ನೂ ಹಲವು ಸಿನಿಮಾಗಳನ್ನು ಮಾಡುವ ಶಕ್ತಿ ಬಂದಂತಾಗಿದೆ. ಆದರೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಮಾತ್ರ ಯಶ್ ನಟನೆಯ 'ಕೆಜಿಎಫ್' ಸಿನಿಮಾ ಬಗ್ಗೆ ಯಾಕೋ ಅಸಮಧಾನ. ಈ ಸಿನಿಮಾ ಬಗ್ಗೆ ಯಾಕೋ ಕೋಪ