ಕನ್ನಡದ ನಟಿಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ನಿರ್ಮಾಪಕ ಅರವಿಂದ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. 9ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈ ನಟಿಗೆ, 2021ರಲ್ಲಿ ಅರವಿಂದ್ ರೆಡ್ಡಿ ಪರಿಚಯವಾದದ್ದು. ಆರಂಭದಲ್ಲಿ ಇಬ್ಬರಿಗೂ ಆಳವಾದ ಸ್ನೇಹ ಬೆಳೆದರೂ, ನಂತರ ದೂರವಾಗಿದ್ದರು. ಬಳಿಕ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದ ರೆಡ್ಡಿ, ಆಕೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಷ್ಟೇ ಅಲ್ಲ, ಆಕೆಯ ಬಟ್ಟೆ ಹರಿದು ಅರೆಬೆತ್ತಲೆಗೊಳಿಸಿದ್ದನೆಂಬ ಆರೋಪವಿದೆ. ಇದರಿಂದ ಬೇಸತ್ತ ನಟಿ ಪೊಲೀಸರಿಗೆ ದೂರು ನೀಡಿದ್ದಾಳೆ.