Current Date 15 Dec, 2025

'ಕಾಂತಾರ- 1' ಬಳಿಕ ಹೊಸ ಚಿತ್ರಕ್ಕೆ 6 ತಿಂಗಳು ಕಾಲ್‌ಶೀಟ್ ಕೊಟ್ಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅಂತೂ ಇಂತೂ 'ಕಾಂತಾರ' ಗುಂಗಿನಿಂದ ಹೊರ ಬಂದಿದ್ದಾರೆ. 5 ವರ್ಷಗಳಿಂದ ಇದೊಂದೇ ಚಿತ್ರದಲ್ಲಿ ಅವರು ಮುಳುಗಿದ್ದರು. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ಬಂದು ಗೆದ್ದಿತ್ತು. ಇತ್ತೀಚೆಗೆ ಪ್ರೀಕ್ವೆಲ್ ಬಂದು ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ನಡುವೆ ಯಾವುದೇ ಸಿನಿಮಾ ಮಾಡಲಿಲ್ಲ. ಜನವರಿಯಿಂದ ಜೂನ್‌ವರೆಗೆ 6 ತಿಂಗಳ ಕಾಲ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಲು ರಿಷಬ್ ಶೆಟ್ಟಿ ಮನಸ್ಸು ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ಸಹ ನಡೆದಿದೆ ಎನ್ನಲಾಗ್ತಿದೆ. ಚಿತ್ರದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್ ಕೂಡ ವಿವಾದಕ್ಕೆ ಕಾರಣವಾಗಿತ್ತು.