ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮೂಲಕ ಎಲ್ಲರನ್ನೂ ನಗಿಸುತ್ತಿದ್ದಾರೆ. ಅವರ ಹೀರೋ ಆಗಿ ನಟಿಸಿರುವ ‘ಸೂಪರ್ ಹಿಟ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಗಿಲ್ಲಿ ನಟ ಅವರ ಜೊತೆ ಹಲವು ಕಾಮಿಡಿ ಕಲಾವಿದರ ದಂಡೇ ಇದೆ.
ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾದ ವಿಜಯಾನಂದ ಅವರು ಕಮರ್ಶಿಯಲ್ ಧಾಟಿಯಲ್ಲಿ ಹಾಸ್ಯ ಪ್ರಧಾನವಾಗಿ ‘ಸೂಪರ್ ಹಿಟ್’ ಸಿನಿಮಾ ಮಾಡಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಈ ಚಿತ್ರದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.